• 1279
  • 1280
  • 1281

ಸಮಾಜ ಸಂಪರ್ಕ ವೇದಿಕೆಯ ಬಗ್ಗೆ

ಕೇಂದ್ರ ಮತ್ತು ರಾಜ್ಯ ಸರ್ಕಾರದ ಎ.ಬಿ.ಸಿ ಸಮೂಹಕ್ಕೆ ಸೇರಿದ ನೌಕರರು/ಅಧಿಕಾರಿಗಳು ಸೇರಿ ಗ್ರಾಮೀಣಭಾಗದ ರೈತಾಪಿವರ್ಗದ ಜನಗಳ ಶ್ರೇಯೋಭಿವೃದ್ಧಿಯ ಆಶಯದೊಂದಿಗೆ 14.01.1988 ರಂದು ಸಮಾಜ ಸಂಪರ್ಕ ವೇದಿಕೆಯನ್ನು ಅಸ್ತಿತ್ವಕ್ಕೆ ತರಲಾಯಿತು. ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾಗಿದ್ದ ಭೈರವೈಕ್ಯ ಶ್ರೀ ಶ್ರೀ ಶ್ರೀ ಡಾ|| ಬಾಲಗಂಗಾಧರನಾಥ ಸ್ವಾಮೀಜಿಯವರ ನೇತೃತ್ವದಲ್ಲಿ ಸ್ಥಾಪಿತವಾಗಿದ್ದು ಹಲವಾರು ಪ್ರಗತಿಪರ ಕಾರ್ಯಚಟುವಟಿಕೆಗಳನ್ನು ವೇದಿಕೆಯು ನಡೆಸುತ್ತಾ ಬಂದಿರುತ್ತದೆ.

ಇನ್ನು ಓದಿ

ಯೋಜನೆಗಳು

ವೇದಿಕೆಯ ವತಿಯಿಂದ ಸಮಾಜದ ಮಕ್ಕಳಿಗೆ ಮತ್ತು ಪೋಷಕರಿಗೆ ಅನುಕೂಲವಾಗಲು ವಿವಾಹಮಾಹಿತಿ ಕೇಂದ್ರವನ್ನು ಸ್ಥಾಪಿಸಲಾಗಿದ್ದು ಈ  ಕೇಂದ್ರವು ಅತ್ಯತ್ತಮವಾಗಿ ಕೆಲಸಮಾಡುತ್ತಿದೆ. ಇಲ್ಲಿಯವರಗೆ 17043 ವಧುಗಳು, 16498 ವರಗಳು ಒಟ್ಟು 33541 ವಧುವರರು ತಮ್ಮ ಹೆಸರುಗಳನ್ನು ನೋಂದಾಯಿಸಿದ್ದು ಆ ಪೈಕಿ ಇಲ್ಲಿಯವರೆಗೆ 15338 ವಧುಗಳಿಗೆ, 14754 ವರಗಳಿಗೆ ಒಟ್ಟು 30092 ವಧುವರರಿಗೆ ಕಂಕಣ ಭಾಗ್ಯ ಕೂಡಿಬಂದಿದೆ.

ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವಾಗಿ ವಿದ್ಯಾರ್ಥಿವೇತನ ನೀಡುವ ವ್ಯವಸ್ಥೆಇದ್ದು ಇಲ್ಲಿಯವರಗೆ 605 ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗಿದೆ. ಪ್ರತಿ ವರ್ಷ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡಿ ಸನ್ಮಾನಿಸಲಾಗುತ್ತಿದ್ದು, ಇಲ್ಲಿಯವರಗೆ 1350 ವಿದ್ಯಾರ್ಥಿಗಳಿಗೆ ಹಾಗೆಯೇ ಇಲ್ಲಿವರೆಗೆ 105 ಮಂದಿ ಸಮಾಜದ ವಿವಿದ ಕ್ಷೇತ್ರಗಳಲ್ಲಿ  ಉತ್ತಮ ಹೆಸರುಗಳಿಸಿರುವ  ಗಣ್ಯವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸಲಾಗಿದೆ.

ಉತ್ತರಹಳ್ಳಿ ಮುಖ್ಯರಸ್ತೆ ತುರಹಳ್ಳಿ ಗ್ರಾಮಕ್ಕೆ ಸೇರಿದ ಭಾರತ ಗೃಹ ನಿರ್ಮಾಣ ಸಹಕಾರ ಸಂಘ ಬಡಾವಣೆಯಲ್ಲಿ ನಾಲ್ಕು ಅಂತಸ್ತಿನ 66 ಕೊಠಡಿಗಳುಳ್ಳ ಬೃಹತ್ ಕಟ್ಟಡವನ್ನು ಸುಮಾರು ನಾಲ್ಕು ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಗ್ರಾಮೀಣ ಪ್ರದೇಶದ ಸಮುದಾಯದ 200 ಬಡಹೆಣ್ಣು ಮಕ್ಕಳ ಅನುಕೂಲಕ್ಕಾಗಿ ಮಹಿಳಾ ವಿದ್ಯಾರ್ಥಿನಿಲಯವು 2018ರಲ್ಲಿ ಉದ್ಘಾಟನೆಗೊಂಡು, ಅವರು ಉನ್ನತಮಟ್ಟದಲ್ಲಿ ವಿದ್ಯಾಭ್ಯಾಸವನ್ನು ಪಡೆದು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಅಭಿವೃದ್ದಿ ಹೊಂದಲು ಅನುವು ಮಾಡಿಕೊಡುತ್ತಿದೆ.

ಐ,ಎ,ಎಸ್/ಕೆ,ಎ,ಎಸ್, ಮತ್ತು ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಸ್ವರ್ಧಾತ್ಮಕ ಪರೀಕ್ಷೆಗೆ ಕೂರುವ ಅಭ್ಯರ್ಥಿಗಳಿಗೆ ಇದುವರೆಗೆ 21 ತರಬೇತಿ ಕೇಂದ್ರಗಳನ್ನು ವೇದಿಕೆ ವತಿಯಿಂದ ನಡೆಸಲಾಗಿದೆ.

ನಗರ  ಪ್ರದೇಶದ ಜನರಿಗೆ ಲಭ್ಯವಿರುವ ವೈಧ್ಯಕೀಯ ಸೌಲಭ್ಯವನ್ನು  ಗ್ರಾಮೀಣ ಪ್ರದೇಶದ ಬಡಜನರ ಬಾಗಿಲಿಗೆ ಒಯ್ಯವ ಸದುದ್ದೇಶದಿಂದ ಎಲ್ಲಾ ವಿಭಾಗಗಳಿಂದ ನುರಿತ ವೈದ್ಯರ ತಂಡಗಳೊಂದಿಗೆ ಗ್ರಾಮೀಣ ಪ್ರದೇಶಗಳಿಗೆ ತೆರಳಿ ವೈದ್ಯಕೀಯ ಶಿಬಿರಗಳನ್ನು ನಡೆಸಲಾಗುತ್ತಿದ್ದು, ಇಲ್ಲಿಯವರೆಗೆ 23  ಉಚಿತ ವೈದ್ಯಕೀಯಚಿಕಿತ್ಸಾ ಶಿಬಿರಗಳನ್ನು ರಾಜ್ಯದ ವಿವಿಧ  ಗ್ರಾಮೀಣ ಪ್ರದೇಶಗಳ ಗ್ರಾಮಗಳಲ್ಲಿ ನಡೆಸಲಾಗಿದ್ದು ಈ ಸಂದರ್ಭದಲ್ಲಿ ಅಗತ್ಯವಿರುವ ಔಷಧಿಗಳನ್ನು ಉಚಿತವಾಗಿ ವಿತರಿಸಲಾಗಿದೆ.

ಭೇಟಿ ನೀಡಿ

ವಿವಿಧ ಕಾರ್ಯಕ್ರಮಗಳ ಛಾಯಾಚಿತ್ರಗಳ ಗ್ಯಾಲರಿಗೆ ಭೇಟಿ ನೀಡಿ